Wednesday, November 11

ಕಲಾಕೃತಿಗಳ ಸಮಾಗಮ; ವರ್ಣಚಿತ್ರಗಳ ಸಂಗಮ


ನಾಡು ಕಂಡ ಅನೇಕ ಹಿರಿಯ ವರ್ಣಚಿತ್ರ ಕಲಾವಿದರ ಕುಂಚದಲ್ಲಿ ಅರಳಿದ ಕಲಾಕೃತಿಗಳ ಸಮಾಗಮ. ಮೈಸೂರು ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ವರ್ಣಚಿತ್ರಗಳ ಸಂಗಮ. ಇದರ ಪ್ರದರ್ಶನ ಮೈಸೂರಿನ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಆರಂಭವಾಗಿದೆ.

ಕಬ್ಬಹಳ್ಳಿಯಲ್ಲಿ ಕುಡಿಯುವ ನೀರೇ ಕಗ್ಗಂಟು


ಕಬ್ಬಹಳ್ಳಿ ಗ್ರಾಮದಲ್ಲಿ ಇಂದು ಕುಡಿಯುವ ನೀರಿಗೆ ಎಲ್ಲಿಲ್ಲದ ಬರಗಾಲ. ಒಂದು ತಾಲೂಕು ಕೇಂದ್ರದಲ್ಲಿರಬೇಕಾದ ಎಲ್ಲಾ ಸೌಲಭ್ಯಗಳು ಈ ಗ್ರಾಮದಲ್ಲಿದೆ. ಆದರೆ ಕುಡಿಯುವ ನೀರಿಗೆ ಮಾತ್ರ ತತ್ವಾರ.

Tuesday, November 10

ಹುಲಿ ಗಣತಿಗೆ ಬಂಡೀಪುರದಲ್ಲಿ ಪೂರ್ವ ತಾಲೀಮು


ಆರು ತಿಂಗಳಲ್ಲಿ ಏಳು ಹುಲಿಗಳು ಬಲಿಯಾದ ಬಂಡೀಪುರ (ನಾಗರಹೊಳೆಯೂ ಸೇರಿ)ದಲ್ಲಿ ಹುಲಿ ಗಣತಿಗೆ ಪೂರ್ವ ತಯಾರಿ ಆರಂಭವಾಗಿದೆ.

ಸರಗಳ್ಳರೇ ಹುಷಾರ್ ಅಂತಾರೆ ನಮ್ ಕಮೀಷ್ನರ್ !


ಮೈಸೂರಿನಲ್ಲಿ ಸರಗಳ್ಳತನಕ್ಕೆ ದಶಕದ ಇತಿಹಾಸ. ಆದರೂ ಪೊಲೀಸರು ಅದಕ್ಕೆ ಕಡಿವಾಣ ಹಾಕಲಾಗಲಿಲ್ಲ. ಸರಗಳ್ಳರು ಮಾತ್ರ ಕಾಲಕ್ಕೆ ತಕ್ಕಂತೆ ವಿವಿಧ ಬೈಕ್ ಗಳನ್ನು ಬದಲಾಯಿಸಿ ಕೃತ್ಯ ಎಸಗುತ್ತಿದ್ದಾರೆ. ಹೋಗಲೀ ಮಹಿಳೆಯರಾದರೂ ಎಚ್ಚೆತ್ತುಕೊಂಡಿದ್ದಾರಾ, ಅದೂ ಇಲ್ಲ. ರಸ್ತೆಯಲ್ಲಿ ತಮ್ಮ 'ಶ್ರೀಮಂತಿಕೆ' ಪ್ರದರ್ಶಿಸಿದರೆ ಕಳ್ಳರು ಬಿಟ್ಟಾರೆ !

ಆಶ್ರಯ ನೀಡದ ಆಶ್ರಯ ಯೋಜನೆ


ಆಶ್ರಯ ಮನೆ ಯೋಜನೆಯಡಿ ಮನೆ ಕಟ್ಟಿಕೊಂಡ ವಾರಾಣೆ ಗ್ರಾ.ಪಂ. ವ್ಯಾಪ್ತಿಯ ಬಾವಲಿ ಗ್ರಾಮದ ಹರಿಜನ ಕಾಲೋನಿ ನಿವಾಸಿಗಳು ಇದೀಗ ತಲೆ ಮೇಲೆ ಸಾಲದ ಹೊರೆ ಹೊತ್ತು ತಿರುಗುತ್ತಿದ್ದಾರೆ.

Monday, November 9

'ಕಾರಂಜಿ' ಕಲರವ

ಅಭದ್ರ ಶೌಚಾಲಯಗಳಿಗೆ ಅಗುಳಿ ಹಾಕಿ


ಸಾವಿನ ಮನೆ ಆಗುತ್ತಿವೆಯೇ ಸಾರ್ವಜನಿಕ ಶೌಚಾಲಯ ! ಇದು ಸುಳ್ಳಲ್ಲಾ ರೀ. ಸರಣಿ ಹಂತಕ ಮೋಹನ್ ಕುಮಾರ್ ಸಾಬೀತುಪಡಿಸಿರುವ ಹೊಸ ಸತ್ಯವಿದು. ನಮ್ಮ ವ್ಯವಸ್ಥೆಯೊಳಗಿನ ದೊಡ್ಡ ಲೋಪವನ್ನು ಎತ್ತಿ ತೋರಿಸಿರುವವನು ಈ ಹಂತಕ.

ಶೋಭಾಗೆ ಕೋಕ್; ಯಾರಿಗೆ ಮೈಸೂರು ಉಸ್ತುವಾರಿ ಲಕ್?


ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರ ರಾಜೀನಾಮೆ ಹಾಗೂ ಸಂಪುಟ ಬದಲಾವಣೆ ಮೂಲಕ ಶಾಸಕರಾದ ರಾಮದಾಸ್, ಶಂಕರಲೀಂಗೇಗೌಡ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

Blogger Template by Blogcrowds